Sunday, 4 December 2011

ಎದ್ದೇಳು ಮಂಜುನಾಥ ಏಳು ಬೆಳಗಾಯಿತು

ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು
ಅಣ್ಣಪ್ಪ ಸ್ವಾಮಿಯು ನಿನ್ನ ಆಜ್ನೆಗೆ ನಿಂತಿಹನು ||ಎದ್ದೇಳು||
ಮುನಿಗಣಂಗಳು ಸ್ತೋತ್ರ ಮಡುತಿಹರು
ದೇವಾದಿ ದೇವತೆಗಳು ನಿನ್ನ ದರುಶಕೆ ಕಾದಿಹರು ||ಎದ್ದೇಳು||
ಮ್ರಗರಾಜನು ನಿನ್ನ ದರುಶನಕೆ ಬಂದೆಹನು
ಗಜರಾಜನು ನಿನಗೆ ಚಾಮರವ ಬೀಸುತಿಹನು
ನಿನ್ನ ಆಭರಣಗಳಿಗಾಗಿ ಆದಿಶೇಷನು ನಿನ್ನ ಸೇರಲು
ಕಾತರಿಸುತಿಹನು ||ಎದ್ದೇಳು||
ಸರಿಗಪದ ಗಪದಪಸ ಗರಿದಸಗ ಸನಿದಪಸಾ
ಸವಿಮಾತಿನ ಅರಗಿಣಿಯು ನಿನ್ನ ಧ್ಯಾನದಲಿಹುದು
ಪಾರಿವಾಳಗಳು ನಿನ್ನ ದರುಶನಕೆ ಕಾದಿಹವು
ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು
ತಡವು ಏತಕೆ ಪ್ರಭುವೇ ದರುಶನವ ನೀಡೇಳು ||ಎದ್ದೇಳು||
ನೇತ್ರಾವತಿಯಲ್ಲಿ ಮಿಂದು ಜನರು ವಿಧವಿಧದಿ ಸೇವೆಗಳ ಗೈಯುತಿಹರು
ಸರ್ವ ರಕ್ಷಕನೆ ನೀನು ದರುಶನ ನೀಡೇಳು
ವಿಪ್ರರೆಲ್ಲರು ಕೂಡಿ ಘೋಷಿಸುತಿಹರು ಮೋಕ್ಷವನು ನೀಡೇಳು
ರವಿಯ ಕಿರಣವು ನಿನ್ನ ಮಹಾದ್ವಾರವನ್ನು ಬೆಳಗುತಿಹುದು
ದರುಶನವ ನೀಡೇಳು ಏಳು ಬೆಳಗಾಯಿತು ||ಎದ್ದೇಳು||