Thursday, 14 September 2023

ಹರಿ ಭಜನೆ

 ಹರಿ ಎನ್ನಿರೋ ಗೋವಿಂದ ಎನ್ನಿರೋ 

ಗೋಪಾಲ ಎನ್ನಿರೋ ಹರಿ ನಾರಾಯಣ 

ಗೋವಿಂದ ಗೋಪಾಲ ಹರಿ ನಾರಾಯಣ 


ಈಶ ಎನ್ನಿ ಜಗದೀಶ ಎನ್ನಿ 

ಸರ್ವೇಶ ಎನ್ನಿ ಪರಮೇಶ ಎನ್ನಿ 


ರಾಮ ಎನ್ನಿ ರಾಜಾರಾಮ ಎನ್ನಿ 

ಸೀತಾ ರಾಮ ಎನ್ನಿ 

ಆತ್ಮ ರಾಮ ಎನ್ನಿ 


ವ್ಯಾಸ ಎನ್ನಿ ವೇದವ್ಯಾಸ ಎನ್ನಿ 

ಮುನೀಂದ್ರ ಎನ್ನಿ ರಾಘವೇಂದ್ರ ಎನ್ನಿ 


ರಾಮ ಎನ್ನಿ ಘನಶ್ಯಾಮ ಎನ್ನಿ 

ಮೇಘಶ್ಯಾಮ ಎನ್ನಿ 

ರಾಧಾಶ್ಯಾಮ ಎನ್ನಿ

Sunday, 4 December 2011

ಎದ್ದೇಳು ಮಂಜುನಾಥ ಏಳು ಬೆಳಗಾಯಿತು

ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು
ಅಣ್ಣಪ್ಪ ಸ್ವಾಮಿಯು ನಿನ್ನ ಆಜ್ನೆಗೆ ನಿಂತಿಹನು ||ಎದ್ದೇಳು||
ಮುನಿಗಣಂಗಳು ಸ್ತೋತ್ರ ಮಡುತಿಹರು
ದೇವಾದಿ ದೇವತೆಗಳು ನಿನ್ನ ದರುಶಕೆ ಕಾದಿಹರು ||ಎದ್ದೇಳು||
ಮ್ರಗರಾಜನು ನಿನ್ನ ದರುಶನಕೆ ಬಂದೆಹನು
ಗಜರಾಜನು ನಿನಗೆ ಚಾಮರವ ಬೀಸುತಿಹನು
ನಿನ್ನ ಆಭರಣಗಳಿಗಾಗಿ ಆದಿಶೇಷನು ನಿನ್ನ ಸೇರಲು
ಕಾತರಿಸುತಿಹನು ||ಎದ್ದೇಳು||
ಸರಿಗಪದ ಗಪದಪಸ ಗರಿದಸಗ ಸನಿದಪಸಾ
ಸವಿಮಾತಿನ ಅರಗಿಣಿಯು ನಿನ್ನ ಧ್ಯಾನದಲಿಹುದು
ಪಾರಿವಾಳಗಳು ನಿನ್ನ ದರುಶನಕೆ ಕಾದಿಹವು
ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು
ತಡವು ಏತಕೆ ಪ್ರಭುವೇ ದರುಶನವ ನೀಡೇಳು ||ಎದ್ದೇಳು||
ನೇತ್ರಾವತಿಯಲ್ಲಿ ಮಿಂದು ಜನರು ವಿಧವಿಧದಿ ಸೇವೆಗಳ ಗೈಯುತಿಹರು
ಸರ್ವ ರಕ್ಷಕನೆ ನೀನು ದರುಶನ ನೀಡೇಳು
ವಿಪ್ರರೆಲ್ಲರು ಕೂಡಿ ಘೋಷಿಸುತಿಹರು ಮೋಕ್ಷವನು ನೀಡೇಳು
ರವಿಯ ಕಿರಣವು ನಿನ್ನ ಮಹಾದ್ವಾರವನ್ನು ಬೆಳಗುತಿಹುದು
ದರುಶನವ ನೀಡೇಳು ಏಳು ಬೆಳಗಾಯಿತು ||ಎದ್ದೇಳು||

Friday, 2 December 2011

ಗಣೇಶ ಪ್ರರ್ಥನೆ

ಮೂಸಿಕ ವಹನ  ಮೋದಕ ಹಸ್ತ ಚಮರ ಕರ್ಣ ವಿಳಂಬಿತ ಸೂತ್ರ
ವಮನ ರೂಪ ಮಹೇಶ್ವರ ಪುತ್ರ ವಿಘ್ನವಿನಯಕ ನಮಸ್ತೆ ನಮಸ್ತೆ ನಮಃ

ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ ತಂದೆ ಕಯೋ ನಮ್ಮ ಕರಿಮುಖ

ಎಲ್ಲರು ಒಂದಾಗಿ ನಿನ್ನ ನಮಿಸಿ ನಲಿಯೊದು ನೊಡೊಕೆ ಚೆನ್ನ
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗನಪನೆ ಕೈ ಹಿಡಿಯೊ ಮುನ್ನ

ಸೂರ್ಯನೆದುರಲ್ಲಿ ಮಂಜು ಕರಗುವ ರೀತಿ 
ನಿನ್ನ ನೆನೆಯಲು ಒಡನೆ ಒಡ್ಡುವುದು ಬೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೊರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ

ಬೆನಕ ಬೆನಕ ಏಕ ಧಂತಾ
ಪಚ್ಚೆ ಕಲ್ಲು ಪಾನಿಮೆಟ್ಲು ಒಪ್ಪುವ ವಿಘ್ನೆಶ್ವರ
ನಿನಗೆ ಇಪ್ಪತೊಂದು ನಮಸ್ಕಾರಗಳು